Page 1 of 1

Gentleman, ಜೆಂಟಲ್ ಮ್ಯಾನ್ - Prajwal Devaraj, Dir: Jadesh Kumar

Posted: Sun Jan 05, 2020 4:54 am
by tenniskrishna
https://www.chitraloka.com/news/22009-d ... leman.html

ಇವರು ಡೈನಮಿಕ್ ಪ್ರಿನ್ಸ್. ಅರ್ಥಾತ್ ಪ್ರಜ್ವಲ್‌ ದೇವರಾಜ್. ಅವರು ಆ್ಯಕ್ಷನ್ ಪ್ರಿನ್ಸ್. ಅಂದ್ರೆ ಧ್ರುವ ಸರ್ಜಾ. ಇವರಿಬ್ಬರೂ ಒಟ್ಟಿಗೇ ಌಕ್ಟ್ ಮಾಡುತ್ತಿದ್ದಾರಾ ಎಂದೆಲ್ಲ ಕೇಳಬೇಡಿ. ಆ ಶುಭ ಘಳಿಗೆ ಇನ್ನೂ ಬಂದಿಲ್ಲ. ಆದರೆ, ಡಿಫರೆಂಟ್ ಕಾನ್ಸೆಪ್ಟ್‌ ಮೂಲಕವೇ ಟ್ರೆಂಡ್ ಸೃಷ್ಟಿಸಿರುವ ಜಂಟಲ್‌ಮನ್‌ ಚಿತ್ರದ ಟ್ರೇಲರ್ ಬಿಡುಗಡೆಗೆ ಧ್ರುವ ಸರ್ಜಾ ಮುಖ್ಯ ಅತಿಥಿ.

ಜನವರಿ 6ರಂದು ಬೆಳಗ್ಗೆ 11 ಗಂಟೆಗೆ ಆನಂದ್‌ ಆಡಿಯೋ ಯೂ ಟ್ಯೂಬ್‌ ಚಾನಲ್‌ನಲ್ಲಿ ಟ್ರೇಲರ್‌ ರಿಲೀಸ್ ಆಗುತ್ತಿದೆ. ಅದೇ ದಿನ 12 ಗಂಟೆಗೆ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಟ್ರೇಲರ್‌ ಬಿಡುಗಡೆಯೂ ಇದೆ. ಆ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಚೀಫ್ ಗೆಸ್ಟ್.

ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುವ ನಾಯಕನಾಗಿ ನಟಿಸಿದ್ದಾರೆ ಪ್ರಜ್ವಲ್‌. ಅಂದರೆ ದಿನಕ್ಕೆ 18 ಗಂಟೆ ನಿದ್ರೆ, 6 ಗಂಟೆ ಮಾತ್ರ ಎಚ್ಚರ ಇರುವ ನಾಯಕ. ಆ 6 ಗಂಟೆಗಳಲ್ಲಿ ಹೀರೋ ಲವ್ ಮಾಡಬೇಕು, ಫೈಟ್ ಮಾಡಬೇಕು. ಅಕಸ್ಮಾತ್ ಆಗಿ ಸಿಲುಕಿಕೊಳ್ಳೋ ಸಮಸ್ಯೆಯಿಂದ ಹೊರಬರಬೇಕು. ಜಾಗ ಸಿಕ್ಕರೆ ಗೊರಕೆ ಹೊಡೆಯೋ ಹೀರೋ ಅದರಿಂದ ಹೇಗೆ ಹೊರಬರುತ್ತಾನೆ ಅನ್ನೋದೇ ಚಿತ್ರದ ಕಥೆ.

ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ ಈ ಚಿತ್ರಕ್ಕೆ ನಿರ್ಮಾಪಕ. ಜಡೇಶ್‌ ಕುಮಾರ್‌ ನಿರ್ದೇಶಕ. ಐ ಲವ್ ಯೂ ಖ್ಯಾತಿಯ ನಿಶ್ವಿಕಾ ನಾಯ್ಡು ಹೀರೋಯಿನ್. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಚಿತ್ರದಲ್ಲಿ ಪೊಲೀಸ್ ಆಫೀಸರ್. ಉಳಿದ ಡೀಟೈಲ್ಸ್.. ಏನಿದ್ದರೂ ಜನವರಿ 6ಕ್ಕೆ ಕೊಡ್ತಾರೆ.

Re: Gentleman, ಜೆಂಟಲ್ ಮ್ಯಾನ್ - Prajwal Devaraj, Dir: Jadesh Kumar

Posted: Sun Jan 05, 2020 4:55 am
by tenniskrishna
EMI Star back in action :YMPARTY: :YMAPPLAUSE: