Miscellaneous Discussions

sandeep sunstar
Posts: 183
Joined: Fri Dec 27, 2019 5:43 am

Re: Miscellaneous Discussions

Post by sandeep sunstar » Fri Jan 10, 2020 2:46 pm

ಅ. ನ. ಕೃಷ್ಣರಾಯರೇ ನನಗೆ ಶ್ರೀರಕ್ಷೆಯಾಗಲಿ
ತ. ರಾ. ಸುಬ್ಬರಾಯರೇ ಸ್ಪೂರ್ತಿಯನು ನೀಡಲಿ
ಕುವೆಂಪು ಕಾರಂತರು ಅಭಯ ಹಸ್ತವ ಇರಿಸಲಿ
ಮಾಸ್ತಿ ಭೈರಪ್ಪನವರು ಅನವರತ ಹರಸಲಿ

ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ, ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ, ಎಂದೂ ಬರೆಯುತ ಬಾಳುವೆ ।। ಪಲ್ಲವಿ ।।

ಬೆಳ್ಳಿ ತೆರೆಯ ಮೊದಲ ಸಾಹಿತಿ ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ ತ್ರಿವೇಣಿಗೆ ತಲೆ ಬಾಗಿಸುವೆ
ಬಂಗಾರದ ಮನುಷ್ಯ ರಾಮರಾಯರ ಎಂದೂ ನಾನು ಧ್ಯಾನಿಸುವೆ
ಭೂತಯ್ಯನ ಪಾತ್ರವ ಸೃಷ್ಠಿಸಿದ ಗೊರೂರರನ್ನು ಗೌರವಿಸುವೆ
ನಾನೂ ಅವರಂತೆ ಶಾಶ್ವತ ಹೆಸರನು ಪಡೆವ ಶಕ್ತಿಯ ನೀಡೆಂದು ।। ೧ ।।

ಚಿತ್ರಕಥೆ ಬರೆದ ಪುಟ್ಟಣ್ಣನವರು ರಾಷ್ಟ್ರ ಖ್ಯಾತಿಯ ಪಡೆದಂತೆ
ಭಕ್ತ ಕುಂಬಾರದಿ ಹುಣಸೂರರು ಭಕ್ತಿ ಭಾವದಿ ಮೆರೆದಂತೆ
ನಂಜುಂಡಿ ಕಲ್ಯಾಣದ ಉದಯಶಂಕರರು ನೂತನ ದಾಖಲೆ ಬರೆದಂತೆ
ಪ್ರೇಮಲೋಕದ ಹಂಸಲೇಖರು ಯುವಜನ ಮನವನು ಸೆಳೆದಂತೆ
ನಾನೂ ಅವರಂತೆ ಶಾಶ್ವತ ಹೆಸರನು ಪಡೆವ ಶಕ್ತಿಯ ನೀಡೆಂದು ।। ೨ ।।
First person to complete 100 posts in this forum

Sometimes its better to just remain Silent & Smile

Post Reply